ಬಲರಾಮನ ದಿನಗಳು ಸಿನಿಮಾ ವಿಮರ್ಶೆ: ಹಳೆಯ ಬೆಂಗಳೂರಿನ ಅಂಡರ್‌ವರ್ಲ್ಡ್‌ಗೆ ಮತ್ತೊಮ್ಮೆ ಕರೆದೊಯ್ಯುವ ಪ್ರಯತ್ನ
ಬಲರಾಮನ ದಿನಗಳು ಸಿನಿಮಾ ಘೋಷಣೆಯಾದಾಗಿನಿಂದಲೇ ಕನ್ನಡ ಸಿನಿಪ್ರಿಯರಲ್ಲಿ ಒಂದು ಕುತೂಹಲ ಇತ್ತು. ಅದಕ್ಕೆ ಪ್ರಮುಖ ಕಾರಣ ನಿರ್ದೇಶಕ ಕೆ.ಎಂ. ಚೈತನ್ಯ. “ಆ ದಿನಗಳು” ಚಿತ್ರದ ಮೂಲಕ ಬೆಂಗಳೂರಿನ ಅಂಡರ್‌ವರ್ಲ್ಡ್ ಅನ್ನು ತೆರೆ ಮೇಲೆ ಅತ್ಯಂತ ನೈಜವಾಗಿ ತೋರಿಸಿದ್ದ ನಿರ್ದೇಶಕರು, ಹಲವು ವರ್ಷಗಳ ನಂತರ ಮತ್ತೆ ಅದೇ ಜಗತ್ತಿಗೆ ಮರಳಿದ್ದಾರೆ. ಹಾಗಾಗಿ ಈ ಸಿನಿಮಾ ಆ ದಿನಗಳುಗೆ ಸಮಾನವಾಗುತ್ತದೆಯೇ ಎನ್ನುವ ನಿರೀಕ್ಷೆ ಸಹಜವಾಗಿಯೇ ಇತ್ತು. ಸಿನಿಮಾ 1980 ಮತ್ತು 1990ರ ದಶಕದ ಬೆಂಗಳೂರಿನ ಅಂಡರ್‌ವರ್ಲ್ಡ್ ಹಿನ್ನೆಲೆಯಲ್ಲೇ ಸಾಗುತ್ತದೆ. ಬಲರಾಮ […]










